ಧಾರವಾಡದಲ್ಲಿ ಸಂತ್ರಸ್ತರಿಗೆ ಸಹಬಾಳ್ವೆ ಸಂಸ್ಥೆಯಿಂದ ಸಹಾಯ ಹಸ್ತ
ಧಾರವಾಡ: ಸಹಬಾಳ್ವೆ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ಇತ್ತೀಚಿಗೆ ಧಾರವಾಡದ ಸಂತ್ರಸ್ತರಿಗೆ ಉಚಿತ ಸಾವಯವ ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯಕಾರ್ಯ ಸಮಿತಿ ಸದಸ್ಯರಾದ ಶ್ರೀ ಚಿದಂಬರ ನಿಂಬರ್ಗಿ ಸಮನ್ವಯ ಮಾಡಿದರು.
ಸಹಬಾಳ್ವೆ ಸಂಸ್ಥೆ ಅಧ್ಯಕ್ಷ ಡಾ. ರಾಘವೇಂದ್ರ ಪ್ರಸಾದ್ "ಸಂತ್ರಸ್ತರನ್ನು ಪ್ರೀತಿಯಿಂದ ಪೋಷಿಸಿ ಮತ್ತು ಸತ್ಕರಿಸಿ" ಎಂದು ತಿಳಿಸಿದರು.
ಶ್ರೀ ಸಿದ್ಧಾರೂಢ ಮಿಷನ್, ಸಹಬಾಳ್ವೆ ಸಂಸ್ಥೆ ಹಾಗೂ ಸೌಖ್ಯಾ ನ್ಯಾಚುರಲ್ ಫುಡ್ಸ್ ಅಂಡ್ ಬಿವರೇಜ್ ಸಹಯೋಗದಲ್ಲಿ ಫುಡ್ ಕಿಟ್ ವಿತರಣಾ ಕಾರ್ಯಕ್ರಮ ಹಲವಾರು ಜಾಗಗಳಲ್ಲಿ ನಡೆದಿದೆ.
ಧಾರವಾಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಸಹಬಾಳ್ವೆ ಸಂಸ್ಥೆ ಆಹಾರ ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮ ಪೂರ್ಣಗೊಳಿಸಿದೆ ಮತ್ತು ಇನ್ನು ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದು ಸಹಬಾಳ್ವೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.